ಅಮಿತಾಭ
	ಮಹಾಯಾನಪಂಥದವರು ನಿರೂಪಿಸುವ ಐವರು ಧ್ಯಾನಿಬುದ್ಧರಲ್ಲಿ ಒಬ್ಬ. ಅಮಿತಾಭ ಎಂದರೆ ಮಿತಿಯಿಲ್ಲದ ಬೆಳಕು ಎಂದರ್ಥ. ಧ್ಯಾನ ಮಗ್ನನಾದ ಬುದ್ಧ ತನ್ನ ಪ್ರಭೆಯಿಂದ ವಿಶ್ವವನ್ನೆಲ್ಲ ಬೆಳಗಿ ಜನರಲ್ಲೆಲ್ಲ ಬೋಧೆಯನ್ನು ಮೂಡಿಸುವನೆಂಬ ಶ್ರದ್ಧೆಯಿಂದ ರೂಪುಗೊಂಡ ಕಲ್ಪನೆಯಿದು. ಇವನ ವರ್ಣ ರಕ್ತವೆಂದೂ ಆಧಿಪತ್ಯ ಸೂರ್ಯ ಮುಳುಗುವ ಪಶ್ಚಿಮದಿಕ್ಕೆಂದೂ ನಂಬಿಕೆ. ಸುಖಾವತೀವ್ಯೂಹವೆಂಬ ಸಂಸ್ಕøತ ಗ್ರಂಥದಲ್ಲಿ ಅಮಿತಾಭ ಮತ್ತು ಅವನ ಸ್ವರ್ಗವಾದ ಸುಖಾವತಿಯ ವರ್ಣನೆಗಳಿವೆ.

(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ